top of page

Aarambh 2026

Sat, 24 Jan

|

Spoorthidhama Cultural Centre, Bengaluru

Two-Day Theatrical Performance

Registration is closed
See other events
Aarambh 2026
Aarambh 2026

Time & Location

24 Jan 2026, 6:30 pm – 25 Jan 2026, 6:30 pm

Spoorthidhama Cultural Centre, Bengaluru, XFGP+JXG, Dwarakavasa Rd, BEL Layout, Phase 1, Bedarahalli, Bengaluru, Karnataka 560091, India

About the event

 ಹೃದಯದ ತೀರ್ಪುಬಾನು | Day 1 | 24 JAN 2026, Time - 06:30PM

 

Theatrical Performance 1

ನೀನಾಸಮ್ ತಿರುಗಾಟ ತಂಡದ ನಾಟಕ - ಹೃದಯದ ತೀರ್ಪುಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿರಂಗರೂಪ, ನಿರ್ದೇಶನ: ಡಾ| ಎಂ. ಗಣೇಶ್ಒಂದು ವಿಶಿಷ್ಟ ಸಾಂಸಾರಿಕ ವೃತ್ತಾಂತ ಈ ಕೃತಿಯೊಳಗೆ ಚಿತ್ರಿತವಾಗಿದೆ. ಹಣ್ಣಿನಂಗಡಿ ನಡೆಸುತ್ತಿರುವ ಯೂಸುಫ್ ತಾಯಿ ಮೆಹಬೂಬ್‌ಬೀ ಮತ್ತು ಹೆಂಡತಿ ಅಖಿಲಾಳೊಂದಿಗೆ ಸಾಕಷ್ಟು ಅನುಕೂಲವಾಗಿಯೇ ಇದ್ದರೂ ಒಂದು ಸಮಸ್ಯೆ ಅವನ ಬೆನ್ನುಹತ್ತಿದೆ – ಅವನ ಹೆಂಡತಿಗೆ ತನ್ನ ಗಂಡನು ತಾಯಿಗೆ ಕೊಡುವ ಗಮನವು ಮತ್ಸರಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಯೂಸುಫ್ ತಾಯಿಯನ್ನು ಬೇರೆ ಮನೆಯಲ್ಲಿರಿಸುತ್ತಾನೆ, ತಾಯಿಗೆ ತರುವ ವಸ್ತುಗಳನ್ನೆಲ್ಲ ಹೆಂಡತಿಗೂ ತರುತ್ತಾನೆ. ಹಾಗಿದ್ದರೂ ಸಮಸ್ಯೆ ಪರಿಹಾರವಾಗದೆ ಗಂಡ ಹೆಂಡಿರ ನಡುವೆ ಜಗಳಗಳು ನಡೆಯುತ್ತವೆ. ಅಂಥ ಒಂದು ಜಗಳದ ಉತ್ತುಂಗದಲ್ಲಿ ತನ್ನ ತಾಯಿಗೆ ಬೇರೊಂದು ಮದುವೆ ಮಾಡಿಸುವುದಾಗಿ ಯೂಸುಫನ ಬಾಯಲ್ಲಿ ಬಂದ ಅಚಾನಕ್ ಮಾತು ಆಮೇಲೆ ಆ ಹಾದಿಯಲ್ಲಿ ಆತ ಮುನ್ನಡೆಯಲು ಪ್ರೇರಕವಾಗುತ್ತದೆ. ಆದರೆ, ಅದರಿಂದ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿ, ಸ್ವತಃ ಯೂಸುಫನ ಹೆಂಡತಿ ಅತ್ತೆಯ ಮದುವೆ ನಿಲ್ಲಿಸಲು ಊರವರಿಂದ ಪಂಚಾಯ್ತಿ ಮಾಡಿಸುತ್ತಾಳೆ. ಆ ಉತ್ತುಂಗದಲ್ಲಿ ತಾಯಿಯೇ ತನ್ನ ಮಗನ ಪ್ರಸ್ತಾಪವನ್ನು ಸಮರ್ಥಿಸುತ್ತ, ಮಗ-ಸೊಸೆಯನ್ನು ಬಿಟ್ಟು ಸಾಗುವ ಆರ್ದ್ರ ಕ್ಷಣದೊಂದಿಗೆ ಕತೆ ಮುಗಿಯುತ್ತದೆ. ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುವತ್ತ ಸಾಗುವ ಈ ಕತೆಯನ್ನು ರಂಗದ ಮೇಲೆ…


Tickets

  • Aarambha | Day 1 | ಹೃದಯದ ತೀರ್ಪ

    ಹೃದಯದ ತೀರ್ಪು | ನಾಟಕಕ್ಕೆ ಪ್ರವೇಶ ಟಿಕೆಟ್

    ₹75.00

    +₹1.88 ticket service fee

    Sale ended

Share this event

bottom of page